Wednesday, October 6, 2010

ನಮ್ಮೂರ ಕೆರೆ

ನಮ್ಮೂರು ಒಂದು ಚಿಕ್ಕದಾದ ಗ್ರಾಮ, ಕೇವಲ ೪೦ ಮನೆಗಳಿಂದ ಕೂಡಿದ ಈ ಗ್ರಾಮದ ಹೆಸರು Singanapalya, ಇದು ತುಮಕೂರಿನಿಂದ ಸುಮಾರು ೪೫ KM ದೂರದಲ್ಲಿದೆ. ಈ ಗ್ರಾಮಕ್ಕೆ ಯೂವುದೇ ಬಸ್ಸುಗಳ ಸಂಪರ್ಕವಿಲ್ಲ, ಪತಾಗನಹಳ್ಳಿ ಎಂಬ ಸ್ತಳಕ್ಕೆ ತಲುಪಿ ಬಸ್ಸನ್ನು ಹತ್ತಬೇಕಗಿರುತ್ತದೆ ಅಥವಾ ನಮ್ಮೂರ ಕೆರೆಯಲ್ಲಿ ಸುಮಾರು ೧.೫ KM ನಡೆದು ಹೊಸಪೇಟೆ ತಲುಪಿ ಬಸ್ಸನ್ನು ಹತ್ತಬೇಕಾಗುತ್ತದೆ.

ಈ ರೀತಿ ಇರುವ ಕುಗ್ರಾಮದ ಪಕ್ಕ ಒಂದು ದೊಡ್ಡದಾದ ಕೆರಿಯಿದೆ, ಈ ಕೆರಯು ಏಳು ಗ್ರಾಮಗಳಿಗೆ ಸೇರಿದ್ದು ಅವುಗಳಲಿ ನಮ್ಮೂರು ಒಂದು, ಈ ಕೆರೆಯ ಪಶಿಮಕ್ಕೆ ನಮ್ಮೂರು ಇದೆ ಹಾಗೇ ಕೋಡಿ( ಕೆರೆ ತುಂಬಿದಾಗ ನೀರು ಹೊರಗೆ ಹೋಗುವ ಜಾಗಾ) ಸಹ ನಮ್ಮೂರ ಕಡೆ ಇದೆ. ಇದರ ಏರಿ ಸುಮಾರು ೧ ಆದರೆ ಇಂತ ದೊಡ್ಡ ಕೆರೆಗೆ ಕೇವಲ ಎರಡು ಹಳ್ಳಗಳ ಸಂಪರ್ಕ ಅದು ಸಣ್ಣ ಸಣ್ಣ ಹಳ್ಳಗಳು, ಈ ಕೆರಯ ಏರಿ ಮೇಲೆ ಗಂಗೆಯ ಪುಟ್ಟದಾದ ಗುಡಿ ಇದೆ.

ಈ ಕೆರೆಯನ್ನು ಸುಮಾರು ೫೧ ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ವತಿಯಿಂದ ನಿರ್ಮಿಸಿದ್ದು(೧೯೫೯ ರಲ್ಲಿ) , ಈ ನಿರ್ಮಾಣಕ್ಕೆ ನಮ್ಮ ತಾತನವರ ಜಮೀನು ಸೇರಿದ್ದು, ಇದರ ಬದಲಾಗಿ ಸುಮಾರು ೨ KM ದೂರದಲ್ಲಿರುವ ಬೆಟ್ಟಗುತ್ತಗಳಿಂದ ಕೂಡಿದ ಸರ್ಕಾರೀ ಜಮೀನನ್ನು ನಮಗೆ ಕೊಡಲಾಯಿತು,

ಕೆರೆ ಕಟ್ಟಿದ ವರ್ಷದಿಂದ ಸುಮಾರು ೧೯೯೪ ರ ವರಗೆ ಬಹುಶ: ಪ್ರತಿ ವರ್ಷವೂ ಬರ್ತಿಯಗುತ್ತಿದ್ದ ಕೆರೆಗೆ ಏನು ಕೇಡು ಗಾಲ ಬಂದಿತೋ ಅ ಶಿವನ ಹೆಂಡತಿಯಾದ ಗಂಗೆಯೇ ಬಳ್ಳಲು, ಸತತವಾಗಿ ಏಳು ವರ್ಷಗಳು ಕೆರೆ ಬರ್ತಿಯಗಲೇ ಇಲ್ಲ, ಎಸ್ಟೆ ಜೋರಾಗಿ ಮಳೆ ಬಂದರೂ ಕೆರಗೆ ಹೆಚ್ಚಿನ ನೀರು ಬರುತಿರಲಿಲ್ಲ, ಪ್ರತಿವರ್ಷ ನಮ್ಮೂರ ಪಡ್ಡೆ ಹುಡುಗರೆಲ್ಲ ಸೇರಿ ಇದುತಿದ್ದ ಗಣಪತಿ ಮೂರ್ತಿಯನ್ನು ವಿಸರ್ಜಿಸಲು ಸಹ ನೀರು ಇರುತಿರಲಿಲ್ಲ, ಗ್ರಾಮದ ಜನರೆಲ್ಲಾ ಶಿವನಿಗೆ ಎಷ್ಟು ಬೇಡಿದರು ಗಂಗೆಯನ್ನು ಶಿವ ನಮ್ಮೂರ ಕೆರೆಗೆ ಕಲಿಸಲಿಲ್ಲ.

ಆ ವರ್ಷ ಎಲ್ಲಾರಿಗೂ ಆಚ್ಚರಿ ಕಾದಿತ್ತು, ೨೦೦೧ ಸಾಲಿನಲ್ಲಿ ಆಚರಿಸಿದ ನಮ್ಮೂರ ಜಾತ್ರೆಯಲ್ಲಿ ಗ್ರಾಮ ದೇವತೆಗಳ ಹಿರಿಯ ಪೂರೋಹಿತರಿಂದ ಅಚ್ಚ್ರರಿ ಮಾತುಗಳು ಹೊರಗೆ ಬಂದವು " ನಮ್ಮೂರ ಕೆರೆ ಈ ವರ್ಷ ಬರ್ತಿಯಗುತ್ತದೆ" ಈ ನುಡಿಗಳನ್ನು ಕೇಳಿದ ನಮಗೆಲ್ಲ ಬರಡಾದ ಬೂಮಿಯಲ್ಲಿ ಓಯಸಿಸ್ ಚಿಮ್ಮಿದ ಹಾಗಾಯಿತು, ಎಲ್ಲರು ಆಚ್ಚರಿಯಿಂದ ಕೆರೆಗೆ ಬೀಟಿ ಮಾಡತೊಡಗಿದರು, ಆ ವರ್ಷದಲ್ಲಿ ಜೋರಾಗಿ ಮಳೆಯಾದ ತಕ್ಷಣವೇ ಅನೇಕ ಜನರು ಕೆರೆಗೆ ಬಂದು ವೀಕ್ಷಣೆ ಮಾಡುತಿದ್ದರು.

ಅದೊಂದು ದಿನ ಸುಮಾರು ೪ ಗಂಟೆಗೆ ನಾನೆಂದು ಕಂಡರಿಯದ ಹಾಗೇ ಕೇವಲ ೩೦ ನಿಮಿಷಗಳ ಕಾಲ ಜುಯೆಂದು ಮಳೆ ಬಂದು, ದೊಡ್ಡದಾದ ಕರಿ ಮೋಡಗಳೆಲ್ಲ ಆಕಾಶದಿಂದ ಕಳಚಿ ಕೆಳಗೆ ಬಿದಂತಯಿತು, ಮಳೆ ನಿಂತ ತಕ್ಷಣವೇ ನಾನು , ನಮ್ಮ ತಂದೆ. ನನ್ನ ತಮ್ಮ ಹಾಗು ಕೆಲವು ನಮ್ಮೊರಿನ ಯುವಕರು ಮೀನನ್ನು ಹಿಡಿದು ತರಲು ಕೆರೆಯ ಮುಕ್ಯವಾದ ಹಳ್ಳದ ಬಳಿ ಹೋದೆವು, ಅಲ್ಲಿಗೆ ತಲುಪಿದ ೫ ನಿಮಿಷಗಳ ನಂತರ ನಮಗೆ ಅಚ್ಹರಿ ಕಾದಿತ್ತು, ಎಂದೆಂದೂ ಕಂಡರಿಯ ಹಾಗೇ( ಗಂಗಾ ನದಿ ತರ) ಹಳ್ಳ ಬರುತಿದ್ದನ್ನು ಕಂಡು ನಾವೆಲ್ಲ ಕಕ್ಕಾಬಿಕ್ಕಿಯದೆವು, ಮೀನಿನ ಅಸೆ ಕಮರಿ ಹೋಗಿ , ಮನೆಗೆ ಹೇಗೆ ತಲುಪುವದು ಎಂಬುದೇ ದೊಡ್ಡ ಸಮಸ್ಯೆಯಾಯಿತು, ನಮ್ಮ ತಂದೆಯ ಬುಜದ ಮೇಲೆ ಕುಳಿತೆ, ಎಲ್ಲರು ನಿದಾನವಾಗಿ ಕೈ ಹಿಡಿದುಕೊಂಡು ಮಾತೊಂದು ಹಳ್ಳವನ್ನು ದಾಟಿ ಸುರಕ್ಷಿತವಾಗಿ ಮನೆ ಸೇರಿದೆವು.

ಬೆಳಿಗ್ಗೆ ೫ ರ ಸಮಯಕ್ಕೆ ಊರಿನ ಪ್ರಮುಕರೆಲ್ಲ ಕೆರೆಯ ಬಳಿ ಜಮಾಯಿಸಿದ್ದರು, ನಾನು ಸಹ ಅವರನ್ನು ೬ ಗಂಟೆಗೆ ಸೇರಿಕೊಂಡೆ, ಕೆರೆಯು ೯೫% ಬರ್ತಿಯಗಿದೆ, ತುಂಬಾ ಕುಶಿಯಿಂದ ಹಿಗ್ಗಿದೆ, ಆದರೆ ಇನ್ನು ೫% ನೀರು ಬೇಕು ಎಂದು ಏನೋ ಒಂದುತರ ಮನಸ್ಸಿನಲ್ಲಿ ಕಳವಳ.

ಮತ್ತೆ ಒಂದು ವಾರದ ನಂತರ ಜೋರು ಮಳೆ, ತುಂಬಿತು ನೋಡಣ್ಣ ನಮ್ಮ ಕೆರೆ, ಏರಿಯಲ್ಲಿ ಬಿರುಕು ನೋಡಿದ ಪ್ರಜ್ಞಾವಂತ ಯುವಕರು, ನೀರಾವರಿ ಆದಿಕಾರಿಗಳ ಗಮನ ಸೆಳೆಯಲು ದೊಡ್ಡದಾಗಿ ಲೋಕಲ್ ಪೇಪರ್ ನಲ್ಲಿ "Singanapalya ಕೆರೆಯ ಏರಿ ಬಿರುಕು" ಎಂಬ ವಿಷಯನ್ನು ಹಾಕಿಸಿದರು, ಅಂದೇ ಮೂರ್ನಾಲ್ಕು ಅಡಿಕರಿಗಳ ಗುಂಪು Ambasiddor ಕಾರಿನಲ್ಲಿ ನಮ್ಮೊರ ಕೆರೆಗೆ ಬಂದಿಳಿಯಿತು, ಎರಡು ಕೊಡಿ ಕಲ್ಲುಗಳನ್ನು ತೆಗೆದು ಹಾಗೆ ಚಂಗನೆ ಮಾಯವಾಯಿತು ಆ ಗುಂಪು.

ಆ ದಿನಗಳಲ್ಲಿ ನಮ್ಮೊರ ಪ್ರೌಡ ಶಾಲೆಯ ವಿದ್ಯಾರ್ಥಿಗಳು( ಅದರಲ್ಲಿ ನಾನು ಒಬ್ಬ) ಪ್ರತಿದಿನ ಸುಮಾರು ೩ KM ಶಾಲೆಗೆ ನಡೆಯಬೇಕಾಗಿತ್ತು, ಆ ದಾರಿಯಲ್ಲಿಯೇ ಕೆರೆ ಇದುದ್ದರಿಂದ ಪ್ರತಿ ದಿನ ಬೆಳಿಗ್ಗೆ ಹಾಗು ಸಂಜೆ ಕೆರೆಯ ನೀರಿನಲ್ಲಿ ಆಟ ಅದುತಿದ್ದೆವು, ಅದೊಂದು ಅದ್ಬುತವಾದ ಕಾಲ.

ಕೆರೆಯು ಆಗಸ್ಟ್ ನಲ್ಲಿ ತುಂಬಿದ್ದರಿಂದ, ನಂತರ ಬಂದ ಬೇಸಿಗೆಗೆ ರೈತರು ಬೆಳೆ ಬೆಳಯಲು ತುಬು ಎತ್ತಲಾಯಿತು, ಕೇವಲ ಮೂರು ತಿಂಗಳಲ್ಲಿ ಕೆರೆಯು ಬರಿದಗುತ್ತಾ ಬಂದಿತು. ಅಂದಿನಿಂದ ಇಂದಿನವರೆಗೂ ಕೆರೆ ಬರ್ತಿಯಗಲೇ ಇಲ್ಲ , ಶಿವ ಗಂಗೆಯನ್ನು ನಮ್ಮೊರ ಕೆರೆಗೆ ಕಲಿಸಲೇ ಇಲ್ಲ.




ಮೊದಲ ಸಲ ಕನ್ನಡದಲ್ಲಿ ಬ್ಲಾಗ್ ಬರಿತಿದಿನಿ, ಇದರಲ್ಲಿ ಏನಾದರು spelling mistake, Grammar mistake ಇದ್ದಾರೆ ಅಡ್ಜಸ್ಟ್ ಮಾಡಿಕೊಳ್ಳಿ.